ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ಬಿಐಎಸ್

Home

ಅರ್ಹತೆ

  1. ಬಿಐಎಸ್ ಉತ್ಪನ್ನ ಪ್ರಮಾಣೀಕರಣ ಪ್ರಮಾಣ ಪತ್ರ ಪಡೆದ ರಾಜ್ಯದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಘಟಕಗಳು ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಅರ್ಹವಾಗಿವೆ.

2.ಬಿಐಎಸ್ ಪ್ರಮಾಣೀಕರಣದ ಮಾನ್ಯತೆಯೊಳಗೆ ಘಟಕವು ಪ್ರೋತ್ಸಾಹಕಗಳನ್ನು ಪಡೆಯಬೇಕಾಗಿದೆ (ಅಂದರೆ ಪ್ರಮಾಣಪತ್ರದ ದಿನಾಂಕದ ವಿತರಣೆಯಿಂದ 1 ವರ್ಷಗಳವರೆಗೆ).

  1. ಯೋಜನೆಯು ಕೇವಲ ಒಂದು ಬಾರಿ ಪ್ರೋತ್ಸಾಹ / ಸಹಾಯವನ್ನು ಮಾತ್ರ ಒದಗಿಸುತ್ತದೆ.

ಪ್ರೋತ್ಸಾಹಧನ :

ಸಾಮಾನ್ಯ ಪ್ರವರ್ಗದವರಿಗೆ  :-ಬಿಐಎಸ್ ಪ್ರಮಾಣೀಕರಣ:  ಬಿಐಎಸ್‌ಗೆ ಪಾವತಿ ಮಾಡಬೇಕಾದ ಶೂಲ್ಕದ 50% (ಗರಿಷ್ಠ ರೂ. 20,000/-)  & ಪರೀಕ್ಷಾ ಉಪಕರಣ ಖರೀದಿಗೆ 25% ವೆಚ್ಚ (ಗರಿಷ್ಠ ರೂ. 5೦,೦೦೦/-)

ವಿಶೇಷ ಪ್ರವರ್ಗದವರಿಗೆ : ಬಿಐಎಸ್‌ಗೆ ಪಾವತಿ ಮಾಡಬೇಕಾದ ಶೂಲ್ಕದ 50% (ಗರಿಷ್ಠ ರೂ. 25,000/-)  & ಪರೀಕ್ಷಾ ಉಪಕರಣ ಖರೀದಿಗೆ 25% ವೆಚ್ಚ (ಗರಿಷ್ಠ ರೂ. 1,೦೦,೦೦೦/-)                        

ಸಲ್ಲಿಸಬೇಕಾದ ದಾಖಲೆಗಳು

1. ನಿಗದಿತ ನಮೂನೆಯಲ್ಲಿ ಅರ್ಜಿ.

2.ಉದ್ಯಮ್ ನೋಂದಣಿಯ ಸ್ವಯಂ ದೃಢೀಕೃತ ಪ್ರತ

3. ಬಿ.ಐ.ಎಸ್. ಪ್ರಮಾಣಪತ್ರದ ಸ್ವಯಂ ದೃಢೀಕೃತ ಪ್ರತಿ.

4. ಬಿ.ಐ.ಎಸ್. ಪ್ರಮಾಣ ಪತ್ರ ಪಡೆಯಲು ವೆಚ್ಚವಾದ ಮೊತ್ತದ ವಿವರಗಳನ್ನು ನಿಗಧಿತ ನಮೂನೆಯಲ್ಲಿ ಇನ್ವಾಯ್ಸ್ ಮತ್ತು ರಸೀದಿಗಳೊಂದಿಗೆ ಸಲ್ಲಿಸುವುದು.

ಅರ್ಜಿ ಸಲ್ಲಿಸುವ ವಿಧಾನ

ಎಂಎಸ್‌ಎಂಇ ಘಟಕಗಳು ನಿಗಧಿತ ನಮೂನೆಯಂತೆ ಭರ್ತಿಮಾಡಿದ ಅರ್ಜಿಯನ್ನು ನಮೂನೆಯಲ್ಲಿನ ಸೂಕ್ತ ದಾಖಲಾತಿಗಳೊಂದಿಗೆ ಕೆ.ಸಿ.ಟಿ.ಯು.ಗೆ ಸಲ್ಲಿಸುವುದು.

×
ABOUT DULT ORGANISATIONAL STRUCTURE PROJECTS