ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಆರ್ಥಿಕ ಸಹಾಯ

Home

ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಆರ್ಥಿಕ ಸಹಾಯ (ಆರ್ & ಡಿ)

ಅರ್ಹತೆ

ಅಸ್ತಿತ್ವದಲ್ಲಿರುವ ದೊಡ್ಡ, ಮೆಗಾ, ಅಲ್ಟ್ರಾ ಮೆಗಾ, ಸೂಪರ್ ಮೆಗಾ ಇಂಡಸ್ಟ್ರೀಸ್/ ಪ್ರತಿಷ್ಠಿತ ಕೈಗಾರಿಕಾ ಅಸೋಸಿಯೇಷನ್'ಗಳು ಕನಿಷ್ಠ 50 ಎಂಎಸ್ಎಂಇಗಳ ಸಹಯೋಗದೊಂದಿಗೆ ​​ಆರ್‌ & ಡಿ ಯೋಜನೆಯ ಮೂಲಕ ಗುರುತಿಸಲಾದ ವಲಯದ ಆರ್ಥಿಕ ಸಾಮರ್ಥ್ಯವನ್ನು ಅರಿತುಕೊಳ್ಳಲು ಇಚ್ಛಿಸುವವರು ಅರ್ಹರಾಗಿರುತ್ತಾರೆ.

ಪ್ರೋತ್ಸಾಹಧನ :

ಉಪಕರಣ/ ಯಂತ್ರೋಪಕೆಣಗಳ ಮೇಲೆ 50% ಸಬ್ಸಿಡಿಗೆ ಅರ್ಹವಾಗಿವೆ. ಗರಿಷ್ಠ ಮಿತಿ ರೂ. 500.00 ಲಕ್ಷ.ನೀತಯ ಅವಧಿಯಲ್ಲಿ ನಿರ್ಧಿಷ್ಟ ಕ್ಷೇತ್ರಗಳ ಮೊದಲ 3 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿ: ಉದಾ: ಮೋಟಾರು ವಾಹನಗಳಿಗೆ ಸಂಬಂಧಿಸಿದ (ಆಟೋಮೇಟಿವ್)‌ ಮತ್ತು ವಾಹನ ಬಿಡುಭಾಗಗಳು, ಔಷಧಿ, ಔಷಧೋಪಕರಣಗಳು; ಎಂಜಿನಿಯರಿಂಗ್‌ ಮತ್ತು ಯಂತ್ರೋಪಕರಣಗಳು (ವಲಯ 1 ರಲ್ಲಿ ಕನಿಷ್ಟ 1 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ)

ಸಲ್ಲಿಸಬೇಕಾದ ದಾಖಲೆಗಳು

  1. ನಿಗಧಿತ ನಮೂನೆಯಲ್ಲಿ ಅರ್ಜಿ.
  2. ಪ್ರಸ್ತಾಪಿತ ಆರ್&ಡಿ ಚಟುವಟಿಕೆಯ ಬಗ್ಗೆ ವಿವರವಾದ ಯೋಜನಾ ವರದಿ.
  3. ಆಥಿತೇಯ ಸಂಸ್ಥೆಯ ನೋಂದಾಯಿತ ಕರಾರು ಪತ್ರ.
  4. ಪ್ರಸ್ತಾಪಿತ ಆರ್&ಡಿ ಚಟುವಟಿಕೆಗಾಗಿ ಆಥಿತೇಯ ಸಂಸ್ಥೆಯೊಂದಿಗೆ ಸಹಕರಿಸಲು ಇಚ್ಚಿಸಿರುವ ಗುರುತಿಸಲ್ಪಟ್ಟ ವಲಯದ ಒಂದೇರೀತಿಯ ಕನಿಷ್ಠ 50 ಎಂಎಸ್ಎಂಇ ಘಟಕಗಳ ಪಟ್ಟಿ.
  5. ಪ್ರಸ್ತಾಪಿತ ಸಂಶೋಧನೆಯ ಬಗ್ಗೆ ಮತ್ತು ಉತ್ಪಾದನಾ ವಲಯಕ್ಕೆ ಅದರಿಂದಾಗುವ ಉಪಯೋಗದ ಬಗ್ಗೆ ಸಂಕ್ಷಿಪ್ತ ವರದಿ.
  6. ಪ್ರಸ್ತಾಪಿತ ಆರ್ & ಡಿ ಚಟುವಟಿಕೆಗೆ ಅಗತ್ಯವಿರುವ ಯಂತ್ರೋಪಕರಣ ಮತ್ತು ಸಲಕರಣೆಗಳ ವಿವರ.
  7. ಆಥಿತೇಯ ಸಂಸ್ಥೆಯು ಕೇಂದ್ರ ಸರ್ಕಾರ / ರಾಜ್ಯ ಸರ್ಕಾರದ ಇತರೆ ಯಾವುದೇ ಇಲಾಖೆಗಳಿಂದ ಪ್ರಸ್ತಾಪಿತ ಆರ್ & ಡಿ ಚಟುವಟಿಕೆಗಾಗಿ ಯಾವುದೇ ಅನುದಾನ ಪಡೆದಿಲ್ಲವೆಂದು ನಿಗಧಿತ ನಮೂನೆಯಲ್ಲಿ ಛಾಪಾ ಕಾಗದದಲ್ಲಿ ಅಫಿಡೆವಿಟ್ ಸಲ್ಲಿಸಬೇಕು.
  8. ನಿಗಧಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರ.
  9. ಆಥಿತೇಯ ಸಂಸ್ಥೆಯಲ್ಲಿ ಅಳವಡಿಸಲಾದ ಯಂತ್ರೋಪಕರಣಗಳ ಬಗ್ಗೆ ನಿಗಧಿತ ನಮೂನೆಯಲ್ಲಿ ಚಾರ್ಟೆಡ್ ಅಕೌಂಟೆಂಟ್ ರವರಿಂದ ಪ್ರಮಾಣ ಪತ್ರ ಸಲ್ಲಿಸಬೇಕು

ಅರ್ಜಿ ಸಲ್ಲಿಸುವ ವಿಧಾನ

  1. ಆಥಿತೇಯ ಸಂಸ್ಥೆಯು ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಸಲ್ಲಿಸಬೇಕು.
  2. ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಸಂಪೂರ್ಣವಾಗಿ ಭರ್ತಿಮಾಡಿದ ಅರ್ಜಿ ಸ್ವೀಕೃತವಾದ ನಂತರ ಆಥಿತೇಯ ಸಂಸ್ಥೆಗೆ ಭೇಟಿನೀಡಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ ಅರ್ಜಿಯನ್ನು ಆರ್ಥಿಕ ಸಹಾಯಧನ ಮಂಜೂರಾತಿಗಾಗಿ ಕೆ.ಸಿ.ಟಿ.ಯು. ಸಂಸ್ಥೆಗೆ ಸಲ್ಲಿಸಬೇಕು.

3. ವ್ಯವಸ್ಥಾಪಕ ನಿರ್ದೇಶಕರು, ಕೆಸಿಟಿಯು ರವರು ಆಥಿತೇಯ ಸಂಸ್ಥೆಯಲ್ಲಿನ ಪ್ರಸ್ತುತ ಮೂಲಸೌಕರ್ಯ, ಕಾರ್ಯತಂತ್ರದ ಉಪಕ್ರಮಗಳು, ಆರ್ & ಡಿ ಯೋಜನೆಗೆ ಅಗತ್ಯವಿರುವ ಉಪಕರಣಗಳು/ ಯಂತ್ರೋಪಕರಣಗಳು, ಯೋಜನೆಯ ಆರ್ಥಿಕ ಸಾಮರ್ಥ್ಯ, ಪೇಟೆಂಟ್‌ಗಳ ವಾಣಿಜ್ಯೀಕರಣದ ವಿವರಗಳು/ ವಿನ್ಯಾಸ ಹಕ್ಕುಸ್ವಾಮ್ಯಗಳು, ಸಾಮಾಜಿಕ ಪರಿಣಾಮ, ಎಂಎಸ್‌ಎಂಇಗಳ ಬೆಳವಣಿಗೆಯ ಪ್ರವೃತ್ತಿಗಳು, ಆರ್ & ಡಿ ಚಟುವಟಿಕೆಯಲ್ಲಿ ತೊಡಗಿರುವ ತಾಂತ್ರಿಕ ವ್ಯಕ್ತಿಗಳ ಸಂಖ್ಯೆ ಮತ್ತು ಅವರ ಅರ್ಹತೆ ಮತ್ತು ಆತಿಥೇಯ ಸಂಸ್ಥೆಯ ನಾಯಕತ್ವದ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಬೇಕು

×
ABOUT DULT ORGANISATIONAL STRUCTURE PROJECTS