ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ಮಳೆ ನೀರು ಕೊಯ್ಲು

Home

ಮಳೆ ನೀರು ಕೊಯ್ಲು (R.W.H.) ಅಳವಡಿಸಿಕೊಳ್ಳಲು ಎಂಎಸ್‌ಎಂಇ ಘಟಕಗಳಿಗೆ ಪ್ರೋತ್ಸಾಹ                         

 

ಅರ್ಹತೆ

  1. ಮಳೆನೀರು ಕೊಯ್ಲು ವಿಧಾನ ಅಳವಡಿಸಿಕೊಂಡ ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಘಟಕಗಳು ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಅರ್ಹವಾಗಿವೆ.
  2. ಈ ಯೋಜನೆಯಡಿ ಮಳೆನೀರು ಕೊಯ್ಲು ವಿಧಾನ ಅಳವಡಿಸಲು ವೆಚ್ಚವಾಗುವ ಮೊತ್ತಕ್ಕೆ ಅನುದಾನ ನೀಡಲಾಗುವುದು.
  3. ಯೋಜನೆಯು ಕೇವಲ ಒಂದು ಬಾರಿ ಪ್ರೋತ್ಸಾಹ / ಸಹಾಯವನ್ನು ಮಾತ್ರ ಒದಗಿಸುತ್ತದೆ.

ಪ್ರೋತ್ಸಾಹಧನ :

ಸಾಮಾನ್ಯ ಪ್ರವರ್ಗ:ಉಪಕರಣದ ಬೆಲೆಯ 50% (ಗರಿಷ್ಠ ರೂ. 2.00 ಲಕ್ಷ)

ವಿಶೇಷ ಪ್ರವರ್ಗ: ಉಪಕರಣದ ಬೆಲೆಯ 75% (ಗರಿಷ್ಠ ರೂ. 2.50 ಲಕ್ಷ)

ಸಲ್ಲಿಸಬೇಕಾದ ದಾಖಲೆಗಳು :

  1. ನಿಗಧಿತ ನಮೂನೆಯಲ್ಲಿ ಅರ್ಜಿ.
  2. ಉದ್ಯಮ್ ನೋಂದಣಿಯ ಸ್ವಯಂ ದೃಢೀಕೃತ ಪ್ರತಿ
  3. ಮಳೆನೀರು ಕೊಯ್ಲು ವಿಧಾನ ಅಳವಡಿಸಿಕೊಂಡಿರುವುದಕ್ಕೆ ಛಾಯಾ ಚಿತ್ರಗಳು. D. ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲು ವೆಚ್ಚವಾದ ಮೊತ್ತದ ವಿವರಗಳನ್ನು ನಿಗಧಿತ ನಮೂನೆಯಲ್ಲಿ ಇನ್'ವಾಯ್ಸ್ ಮತ್ತು ರಸೀದಿಗಳೊಂದಿಗೆ ಸಲ್ಲಿಸುವುದು.
  4. ಘಟಕದವರು ಮಳೆನೀರು ಕೊಯ್ಲು ವಿಧಾನ ಅಳವಡಿಸಲು ಉಪಕರಣ ಖರೀದಿಗಾಗಿ ವೆಚ್ಚವಾಗಿರುವ ಮೊತ್ತಕ್ಕೆ ಚಾರ್ಟೆಡ್ ಇಂಜಿನಿಯರ್'ರವರಿಂದ ಪ್ರಮಾಣೀಕರಿಸಿದ ಪ್ರಮಾಣ ಪತ್ರ (ಮೂಲ ಪ್ರತಿ).

ಅರ್ಜಿ ಸಲ್ಲಿಸುವ ವಿಧಾನ :

ಎಂಎಸ್‌ಎಂಇ ಘಟಕಗಳು ನಿಗಧಿತ ನಮೂನೆಯಂತೆ ಭರ್ತಿಮಾಡಿದ ಅರ್ಜಿಯನ್ನು ನಮೂನೆಯಲ್ಲಿನ ಸೂಕ್ತ ದಾಖಲಾತಿಗಳೊಂದಿಗೆ ಕೆ.ಸಿ.ಟಿ.ಯು.ಗೆ ಸಲ್ಲಿಸುವುದು

×
ABOUT DULT ORGANISATIONAL STRUCTURE PROJECTS