ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ಟೆಕ್ನಾಲಜಿ ಬಿಸಿನೆಸ್ ಇನ್'ಕ್ಯೂಬೇಷನ್ ಸೆಂಟರ್ (ಟಿಬಿಐ)

Home

ಟೆಕ್ನಾಲಜಿ ಬಿಸಿನೆಸ್ ಇನ್'ಕ್ಯೂಬೇಷನ್ ಸೆಂಟರ್ (ಟಿಬಿಐ)

ಅನುಷ್ಠಾನ ಸಂಸ್ಥೆ

ಮಾನ್ಯತೆ ಪಡೆದ ಕೈಗಾರಿಕಾ ಸಂಘಗಳು, ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಯ ಉತ್ತೇಜನದಲ್ಲಿ ಪರಿಣಿತಿ ಹೋಂದಿದ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಂಸ್ಥೆಗಳು.  ಆಥಿತೇಯ ಸಂಸ್ಥೆಯು ಇನ್'ಕ್ಯುಬೇಷನ್ ಚಟುವಟಿಕೆ ಬೆಂಬಲಿಸಲು ಅತ್ಯತ್ತಮ ಪರಿಣಿತ ಮತ್ತು ಮೂಲಸೌಕರ್ಯಗಳನ್ನು ಹೊಂದಿರಬೇಕು. ಶೈಕ್ಷಣಿಕ ಅನ್ವೇಷಣೆಗಳು ಮತ್ತು ಕೈಗಾರಿಕಾ ಸಮಾಲೋಚನೆಗಾಗಿ ಸಂಪೂರ್ಣ R&D ಪ್ರಸ್ತಾಪವು ಅರ್ಹವಾಗಿರುವುದಿಲ್ಲ.

ಪ್ರೋತ್ಸಾಹಧನ :

ಸಾಮಾನ್ಯ ಪ್ರವರ್ಗ :ವಿಕಸನ ಕೇಂದ್ರ (ಇನ್‌ಕ್ಯುಬೇಷನ್‌ ಕೇಂದ್ರ)ದ ವೆಚ್ಚದ 25%  (ಗರಿಷ್ಠ ರೂ. 50.00 ಲಕ್ಷ) (ವಲಯ 1 ರಲ್ಲಿ ಕನಿಷ್ಠ 1 ಟಿಬಿಐಸಿ)

ವಿಶೇಷ ಪ್ರವರ್ಗ : ವಿಕಸನ ಕೇಂದ್ರ (ಇನ್‌ಕ್ಯುಬೇಷನ್‌ ಕೇಂದ್ರ)ದ ವೆಚ್ಚದ 25%  (ಗರಿಷ್ಠ ರೂ. 60.00 ಲಕ್ಷ) (ವಲಯ 1 ರಲ್ಲಿ ಕನಿಷ್ಠ 1 ಟಿಬಿಐಸಿ)

ಸಲ್ಲಿಸಬೇಕಾದ ದಾಖಲೆಗಳು

  1. ನಿಗಧಿತ ನಮೂನೆಯಲ್ಲಿ ಅರ್ಜಿ.
  2. ಆಥಿತೇಯ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ.

4.ಆಥಿತೇಯ ಸಂಸ್ಥೆಯ MOA & AOA.

  1. ಆಥಿತೇಯ ಸಂಸ್ಥೆಯ ಕಳೆದ 3 ವರ್ಷದ ಆಡಿಟ್ ವರದಿ.
  2. ತಂಡದ ಸಂಯೋಜನೆ, ವಿಧಾನ ಮತ್ತು ಅಳವಡಿಸಿಕೊಳ್ಳುವ ವಿಧಾನಗಳ ವಿವರಗಳು.
  3. ಪ್ರಸ್ತುತ ಮೂಲಭೂತ ಸೌಕರ್ಯಗಳ ವಿವರ.

ಅರ್ಜಿ ಸಲ್ಲಿಸುವ ವಿಧಾನ

  1. ಆಥಿತೇಯ ಸಂಸ್ಥೆಯು ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಸಲ್ಲಿಸಬೇಕು.
  2. ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಸಂಪೂರ್ಣವಾಗಿ ಭರ್ತಿಮಾಡಿದ ಅರ್ಜಿ ಸ್ವೀಕೃತವಾದ ನಂತರ ಆಥಿತೇಯ ಸಂಸ್ಥೆಗೆ ಭೇಟಿನೀಡಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ ಅರ್ಜಿಯನ್ನು ಆರ್ಥಿಕ ಸಹಾಯಧನ ಮಂಜೂರಾತಿಗಾಗಿ ಕೆ.ಸಿ.ಟಿ.ಯು. ಸಂಸ್ಥೆಗೆ ಸಲ್ಲಿಸಬೇಕು.
  3. ಕೆಸಿಟಿಯುಗೆ ನೇರವಾಗಿ ಸ್ವೀಕೃತವಾದ ಸಂಪೂರ್ಣ ಅರ್ಜಿಯನ್ನು ಆಯಾ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಕಳುಹಿಸಲಾಗುವುದು. ಜಂಟಿ ನಿರ್ದೇಶಕರು ಕ್ರಮ ಸಂಖ್ಯೆ-2 ರ ಪ್ರಕಾರ ಅರ್ಜಿಯನ್ನು ಪರಿಶೀಲಿಸಬೇಕು ಮತ್ತು ಕೆಸಿಟಿಯುಗೆ ಶಿಫಾರಸ್ಸು ಮಾಡಬೇಕು.

 

×
ABOUT DULT ORGANISATIONAL STRUCTURE PROJECTS