ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಸಲುವಾಗಿ ಪಡೆದ ಸಾಲದಮೇಲೆ ಬಡ್ಡಿ ಸಹಾಯಧನ

Home

 

ಎಂಎಸ್ಎಂಇ ಘಟಕಗಳು ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಸಲುವಾಗಿ ಪಡೆದ ಸಾಲದಮೇಲೆ ಬಡ್ಡಿ ಸಹಾಯಧನ

ಅರ್ಹತೆ

  1. ಕೆ.ಎಸ್.ಎಫ್.ಸಿ. ಅಥವಾ ನಿಗಧಿತ ವಾಣಿಜ್ಯ ಬ್ಯಾಂಕ್ (ಭಾರತ ಸರ್ಕಾರದ ಸಿಎಲ್'ಸಿಎಸ್ಎಸ್ ವ್ಯಾಪ್ತಿಗೆ ಒಳಪಡದ) ಗಳಿಂದ ಸಾಲ ಪಡೆದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಸ್ಎಂಇ ಘಟಕಗಳು ಈ ಯೋಜನೆಯಡಿ ಸಹಾಯಧನ ಪಡೆಯಬಹುದು.
  2. ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಸಲುವಾಗಿ ಪಡೆದ ಸಾಲದ ಒಂದನೇ ಕಂತಿನ ಬಿಡುಗಡೆ ನಂತರ ಬಡ್ಡಿ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಆದರೆ, ಘಟಕವು ತಂತ್ರಜ್ಞಾನ ಮೇಲ್ದರ್ಜೆಗೇರಿಸಿ ವಾಣಿಜ್ಯ ಉತ್ಪಾದನೆ ಮಾಡಿದ ನಂತರ ಬಡ್ಡಿ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬೇಕಾಗಿರುತ್ತದೆ.
  3. ಭಾರತ ಸರ್ಕಾರದ CLCSS ಮಾರ್ಗಸೂಚಿಯಲ್ಲಿ ಅನುಮೋದನೆಗೊಂಡ ಉತ್ಪನ್ನ / ವಲಯ / ಉಪವಲಯಗಳಿಗೆ ಎಂಎಸ್ಎಂಇ ಘಟಕಗಳು ಅತ್ಯುತ್ತಮವಾದ ಮತ್ತು ಸುಧಾರಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು.
  4. ಯೋಜನೆಯು ಕೇವಲ ಒಂದು ಬಾರಿ ಪ್ರೋತ್ಸಾಹ / ಸಹಾಯಧನವನ್ನು ಮಾತ್ರ ಒದಗಿಸುತ್ತದೆ.

 

ಪ್ರೋತ್ಸಾಹಧನ :

ಸಾಮಾನ್ಯ ಹಾಗೂ ವಿಶೇಷ ಪ್ರವರ್ಗ:

ವಲಯ1 : 5%  6 ವರ್ಷದವರೆಗೆ

ವಲಯ2 : 5%  5 ವರ್ಷದವರೆಗೆ

ವಲಯ3 : 5%  5 ವರ್ಷದವರೆಗೆ

 

ಸಲ್ಲಿಸಬೇಕಾದ ದಾಖಲೆಗಳು

 

ಅರ್ಜಿ ಸಲ್ಲಿಸುವ ವಿಧಾನ ಎಂಎಸ್‌ಎಂಇ ಘಟಕಗಳು ನಿಗಧಿತ ನಮೂನೆಯಂತೆ ಭರ್ತಿಮಾಡಿದ ಅರ್ಜಿಯನ್ನು ನಮೂನೆಯಲ್ಲಿನ ಸೂಕ್ತ ದಾಖಲಾತಿಗಳೊಂದಿಗೆ ಕೆ.ಸಿ.ಟಿ.ಯು.ಗೆ ಸಲ್ಲಿಸುವುದು

×
ABOUT DULT ORGANISATIONAL STRUCTURE PROJECTS