ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್‌ (ಕೆ.ಸಿ.ಟಿ.ಯು)

ಕರ್ನಾಟಕ ಸರ್ಕಾರ

ಏರೋಸ್ಪೇಸ್ 9100 ಸರಣಿ (ಎಎಸ್) & NADCAP ಪ್ರಮಾಣಪತ್ರ

Home

ಏರೋಸ್ಪೇಸ್ 9100 ಸರಣಿ (ಎಎಸ್) ಪ್ರಮಾಣೀಕರಣ ಮತ್ತು NADCAP ಪ್ರಮಾಣಪತ್ರ  ಪಡೆಯಲು ಎಂಎಸ್ಎಂಇ ಘಟಕಗಳಿಗೆ ಪ್ರೋತ್ಸಾಹ

ಅರ್ಹತೆ

  1. ಎ.ಎಸ್.-9100 ಪ್ರಮಾಣೀಕರಣ ಪಡೆದ ರಾಜ್ಯದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏರೋಸ್ಪೇಸ್ ವಲಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಘಟಕಗಳು ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಅರ್ಹವಾಗಿವೆ.
  2. ಎ.ಎಸ್.-9100 ಸರಣಿ ಪ್ರಮಾಣೀಕರಣದ ಮಾನ್ಯತೆಯೊಳಗೆ ಘಟಕವು ಪ್ರೋತ್ಸಾಹಕಗಳನ್ನು ಪಡೆಯಬೇಕಾಗಿದೆ (ಅಂದರೆ ಪ್ರಮಾಣಪತ್ರದ ದಿನಾಂಕದ ವಿತರಣೆಯಿಂದ 3 ವರ್ಷಗಳವರೆಗೆ).
  3. ಯೋಜನೆಯು ಕೇವಲ ಒಂದು ಬಾರಿ ಪ್ರೋತ್ಸಾಹ / ಸಹಾಯವನ್ನು ಮಾತ್ರ ಒದಗಿಸುತ್ತದೆ.

ಪ್ರೋತ್ಸಾಹಧನ :

ಸಾಮಾನ್ಯ ಪ್ರವರ್ಗ:

ಎ.ಎಸ್.‌9100  ಸರಣೀ ಪ್ರಮಾಣೀಕರಣಕ್ಕಾಗಿ ಶೇಕಡಾ 75% (ಗರಿಷ್ಠ  ರೂ. 75,000).

NADCAP ಸರಣೀ ಪ್ರಮಾಣೀಕರಣಕ್ಕಾಗಿ ಶೇಕಡಾ 75% (ಗರಿಷ್ಠ ರೂ. 2,00,000).

ವಿಶೇಷ ಪ್ರವರ್ಗ:

ಎ.ಎಸ್.‌9100  ಸರಣೀ ಪ್ರಮಾಣೀಕರಣಕ್ಕಾಗಿ ಶೇಕಡಾ 75% (ಗರಿಷ್ಠ  ರೂ. 1,00,000).

NADCAP ಸರಣೀ ಪ್ರಮಾಣೀಕರಣಕ್ಕಾಗಿ ಶೇಕಡಾ 75% (ಗರಿಷ್ಠ ರೂ. 3,00,000).

ಸಲ್ಲಿಸಬೇಕಾದ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ

  1. ಎಂಎಸ್‌ಎಂಇ ಘಟಕಗಳು ನಿಗಧಿತ ನಮೂನೆಯಂತೆ ಭರ್ತಿಮಾಡಿದ ಅರ್ಜಿಯನ್ನು ನಮೂನೆಯಲ್ಲಿನ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಸಲ್ಲಿಸಬೇಕು.
  2. ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ರವರು ಘಟಕದವತಿಯಿಂದ ಸಂಪೂರ್ಣ ಅರ್ಜಿಯನ್ನು ಸ್ವೀಕರಿಸಿದ ನಂತರ ಘಟಕದ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ಮಾಡಿ ಪ್ರಸ್ತಾವನೆಯನ್ನು ಸೂಕ್ಕ್ತ ಶಿಫಾರಸ್ಸಿನೊಂದಿಗೆ ಎ.ಎಸ್.- 9100 ಪ್ರಮಾಣ ಪತ್ರ ಪಡೆದುದಕ್ಕೆ ಸಹಾಯಧನ ಮಂಜೂರು ಮಾಡಲು ಕೆ.ಸಿ.ಟಿ.ಯು. ಸಂಸ್ಥೆಗೆ ಸಲ್ಲಿಸುವುದು.
  3. ಕೆಸಿಟಿಯುಗೆ ನೇರವಾಗಿ ಸ್ವೀಕೃತವಾದ ಸಂಪೂರ್ಣ ಅರ್ಜಿಯನ್ನು ಆಯಾ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಕಳುಹಿಸಲಾಗುವುದು. ಜಂಟಿ ನಿರ್ದೇಶಕರು ಕ್ರಮ ಸಂಖ್ಯೆ-2 ರ ಪ್ರಕಾರ ಅರ್ಜಿಯನ್ನು ಪರಿಶೀಲಿಸಬೇಕು ಮತ್ತು ಕೆಸಿಟಿಯುಗೆ ಶಿಫಾರಸ್ಸು ಮಾಡಬೇಕು.

                                                  

×
ABOUT DULT ORGANISATIONAL STRUCTURE PROJECTS